ಭಾನುವಾರ, ಜುಲೈ 22, 2018

ಸ್ಕೂಲ್ ಟ್ರಿಪ್ 









                                                 





                                                       ಕ್ಲಸ್ಟರ್ ಹಂತದ  ಪ್ರತಿಭಾ ಕಾರಂಜಿ




ಭಾನುವಾರ, ಡಿಸೆಂಬರ್ 10, 2017

mohan naik bargi
With kannada movie actor in Bengaluru.

                                                       In a function at BRC Honnavar.

Teachers Association activities

Master of ceramony , at Madageri,honnavar




ಶನಿವಾರ, ಜುಲೈ 29, 2017

ಗುರುವಾರ, ಫೆಬ್ರವರಿ 9, 2017

*_ನಿಮ್ಮ ತೂಕಕ್ಕೆ ತಕ್ಕಂತೆ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ…_*


ನೀರು ನಮ್ಮ ನಮ್ಮ ದೇಹಕ್ಕೆ ಅಮೃತಕ್ಕೆ ಸಮಾನ. ನೀರನ್ನು ಒಂದು ಕ್ರಮಬದ್ಧವಾಗಿ ಕುಡಿದರೆ ಸಾಕು,… ಚರ್ಮ, ಅರೋಗ್ಯ ಎಲ್ಲಾ ಚೆನ್ನಾಗಿರುತ್ತದೆ. ಮಕ್ಕಳು, ಮುಖ್ಯವಾಗಿ ಹೆಣ್ಣು ಮಕ್ಕಳು ಸರಿಯಾಗಿ ನೀರು ಕುಡಿಯದಿರುವುದರಿಂದ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ, ನಿತ್ಯಕರ್ಮಗಳನ್ನು ಮುಗಿಸಿದ ನಂತರ, ಉಗುರುಬೆಚ್ಚಗಿನ ನೀರು ಕುಡಿದು ನಿಮ್ಮ ನಿತ್ಯ ಕಾರ್ಯಗಳನ್ನು ಪ್ರಾರಂಭಿಸಿ.ಇದರಿಂದ ನಿಮ್ಮ ಶರೀರ ಎಷ್ಟು ಹಗುರವಾಗಿ, ಖುಷಿಯಿಂದ ಉಲ್ಲಾಸವಾಗಿರುತ್ತದೆ ಎಂಬುದನ್ನು ಸ್ವ ಅನುಭವದಿಂದ ತಿಳಿದುಕೊಳ್ಳಬಹುದು.ಹಾಗೆಯೇ ಊಟಕ್ಕೆ ಅರ್ಧ ಗಂಟೆ ಮುಂಚೆ ನೀರು ಕುಡಿಯಬೇಕು. ಊಟದ ಮದ್ಯದಲ್ಲಿ ಅವಶ್ಯಕತೆ ಇದ್ದರೆ ಗಂಟಲು ನೆನೆಸಿಕೊಳ್ಳಲು ನೀರು ಕುಡಿಯಬೇಕು. ಅದರ ಬದಲಿಗೆ ಪದೇಪದೇ ಗಟಗಟ ಕುಡಿಯಬಾರದು. ಊಟ ಮಾಡಿದ ಒಂದು ಗಂಟೆಯ ನಂತರ ನೀರು ಕುಡಿಯಬೇಕು. ನಿಮ್ಮ ತೂಕಕ್ಕೆ ತಕ್ಕಂತೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಲು ಕೆಳಗೆ ನೋಡಿ.

* 45 ಕೆ.ಜಿ. ವರೆಗಿನ ತೂಕದವರು 1.9ಲೀಟರ್ ನೀರು ಕುಡಿಯಬೇಕು.
* 50 – 2.1 ಲೀಟರ್ ನೀರು ಕುಡಿಯಬೇಕು.
* 55 – 2.3 ಲೀಟರ್ ನೀರು ಕುಡಿಯಬೇಕು.
* 60 – 2.5 ಲೀಟರ್ ನೀರು ಕುಡಿಯಬೇಕು.
* 65 – 2.7 ಲೀಟರ್ ನೀರು ಕುಡಿಯಬೇಕು.
* 70 – 2.9 ಲೀಟರ್ ನೀರು ಕುಡಿಯಬೇಕು.
* 75 – 3.2 ಲೀಟರ್ ನೀರು ಕುಡಿಯಬೇಕು.
* 80 – 3.5 ಲೀಟರ್ ನೀರು ಕುಡಿಯಬೇಕು.
* 85 – 3.7 ಲೀಟರ್ ನೀರು ಕುಡಿಯಬೇಕು.
* 90 – 3.9 ಲೀಟರ್ ನೀರು ಕುಡಿಯಬೇಕು.
* 95 – 4.1 ಲೀಟರ್ ನೀರು ಕುಡಿಯಬೇಕು.
* 100 – 4.3 ಲೀಟರ್ ನೀರು ಕುಡಿಯಬೇಕು.....
*ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು*
*ಜ್ಞಾನ ಸೌರಭ*
______________________________________
★ಭಾರತ ಸರಕಾರ – *ಸತ್ಯಮೇವ ಜಯತೇ* – ಸತ್ಯವೇ ಜಯಿಸುತ್ತದೆ.
★ಲೋಕಸಭೆ – *ಧರ್ಮಚಕ್ರ ಪ್ರವರ್ತನಾಯ*  –ಧರ್ಮಚಕ್ರವನ್ನು ಪರಿಪಾಲಿಸಲು
★ಸರ್ವೋಚ್ಛ ನ್ಯಾಯಾಲಯ – *ಯತೋ ಧರ್ಮಸ್ತತೋ ಜಯಃ* – ಎಲ್ಲಿ ಧರ್ಮವಿರುತ್ತದೋ
ಅಲ್ಲಿ ಜಯವಿರುತ್ತದೆ.
★ಆಲ್ ಇಂಡಿಯಾ ರೇಡಿಯೋ – *ಬಹುಜನ ಹಿತಾಯ ಬಹುಜನ ಸುಖಾಯ* – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.
★ದೂರದರ್ಶನ – *ಸತ್ಯಂ ಶಿವಂ ಸುಂದರಂ*
★ಗೋವಾರಾಜ್ಯ – *ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್* – ಎಲ್ಲರೂ ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.
★ಭಾರತೀಯ ಜೀವ ವಿಮಾ ನಿಗಮ –  *ಯೋಗಕ್ಷೇಮಂ ವಹಾಮ್ಯಹಮ್* – ನಿಮ್ಮೆಲ್ಲರ
ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.
★ಅಂಚೆ ಇಲಾಖೆ – *ಅಹರ್ನಿಶಂ ಸೇವಾಮಹೇ* – ಹಗಲು ರಾತ್ರಿ ನಿಮ್ಮ ಸೇವೆಗಾಗಿ.
★ಕಾರ್ಮಿಕರ ಸಂಸ್ಥೆ – *ಶ್ರಮ ಮೇವ ಜಯತೇ* – ಶ್ರಮವೇ ಜಯಿಸುತ್ತದೆ.
★ಭಾರತೀಯ ಸಂಖ್ಯಾ ಸಂಸ್ಥೆ – *ಭಿನ್ನೇಷ್ವೇಕಸ್ಯ ದರ್ಶನಮ್* – ವಿವಿಧತೆಯಲ್ಲಿ ಏಕತೆ.
★ಭೂಸೇನೆ – *ಸೇವಾ ಅಸ್ಮಾಕಂ ಧರ್ಮಃ* – ಸೇವೆಯೇ ನಮ್ಮ ಧರ್ಮ.
★ವಾಯು ಸೇನೆ – *ನಭಸ್ಪೃಶಂ ದೀಪ್ತಮ್* – ಆಕಾಶವೇ ದೀಪ.
★ಜಲಸೇನೆ – *ಶಂ ನೋ ವರುಣಃ* – ವರುಣನಿಗೆ
ನಮಸ್ಕಾರ.
★ಮುಂಬಯಿ ಪೋಲಿಸ್ – *ಸದ್ರಕ್ಷಣಾಯ ಖಲನಿಗ್ರಹಣಾಯ* – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.
★ಹಿಂದಿ ಅಕಾಡೆಮಿ – *ಅಹಮ್ ರಾಷ್ಟ್ರೀ ಸಂಗಮನೀ
ವಸೂನಾಮ್* – ನಾನು ರಾಷ್ಟ್ರದಲ್ಲಿ ಸಂಘಜೀವಿಯಾಗಿ ಬದುಕುತ್ತೇನೆ.
★ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – *ಹವ್ಯಭಿರ್ಭಗಃ ಸವುತುರ್ವರೆಣ್ಯಂ*
★ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – *ಯೋಗಃ ಕರ್ಮಸು ಕೌಶಲಮ್* – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.
★ವಿಶ್ವವಿದ್ಯಾಲಯ ಅನುದಾನ ಆಯೋಗ –
*ಜ್ಞಾನವಿಜ್ಞಾನಂ ವಿಮುಕ್ತಯೇ*
★ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – *ಗುರುಃ
ಗುರುತಮೋ ಧಾಮಃ* – ಗುರುಗಳಲ್ಲಿ ಗುರುತಮವೇ ಇರಬೇಕು.
★ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ –
*ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ* –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.
★ಇಂದ್ರಪ್ರಸ್ಥ ವಿಶ್ವವಿದ್ಯಾಲಯ – *ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ ಕತ್ತಲೆ ದೂರವಾಗಲಿ.
★ಕಾಶಿ ಹಿಂದೂ ವಿಶ್ವವಿದ್ಯಾಲಯ – *ವಿದ್ಯಯಾ
ಅಮೃತಮಶ್ನುತೇ* – ವಿದ್ಯೆಯಿಂದ ಅಮೃತ ಸಿಗುತ್ತದೆ.
★ಆಂಧ್ರ ವಿಶ್ವವಿದ್ಯಾಲಯ – *ತೇಜಸ್ವಿನಾವಧೀತಮಸ್ತು* - ನಾವೆಲ್ಲರೂ ತೇಜಸ್ವಿಗಳಾಗೋಣ.
★ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – *ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ* – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.
★ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – *ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ* – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.
★ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – *ಶ್ರುತಂ ಮೇ ಗೋಪಾಯ* – ಶ್ರುತಿಗಳು ನಮ್ಮನ್ನು ರಕ್ಷಿಸಲಿ.
★ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – *ಜ್ಞಾನಂ
ಸಮ್ಯಗ್ ವೇಕ್ಷಣಮ್* – ಜ್ಞಾನವೇ ಸರಿಯಾದ ಕಣ್ಣು.
★ಕಾಲಿಕಟ್ ವಿಶ್ವವಿದ್ಯಾಲಯ – *ನಿರ್ಮಯ ಕರ್ಮಣಾ
ಶ್ರೀಃ* – ಶ್ರಮದಿಂದ ಸಂಪತ್ತು ಸಿಗುತ್ತದೆ.
★ದೆಹಲಿ ವಿಶ್ವವಿದ್ಯಾಲಯ – *ನಿಷ್ಠಾ ಧೃತಿಃ ಸತ್ಯಮ್* –
ನಂಬಿಕೆ , ಬುದ್ಧಿ , ಸತ್ಯ
★ಕೇರಳ ವಿಶ್ವವಿದ್ಯಾಲಯ – *ಕರ್ಮಣಿ ವ್ಯಜ್ಯತೆ ಪ್ರಜ್ಞಾ* – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.
★ರಾಜಸ್ಥಾನ ವಿಶ್ವವಿದ್ಯಾಲಯ – *ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ* – ಜಗತ್ತಿನ ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..
★ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – *ಯುಕ್ತಿಹೀನಃ ವಿಚಾರೇ ತು ಧರ್ಮಹೀನಃ ಪ್ರಜಾಯತೇ* – ಮನುಷ್ಯ ಯುಕ್ತಿಹೀನ ವಿಚಾರಗಳಿಂದ ಧರ್ಮಹೀನನೆನಿಸಿಕೊಳ್ಳುತ್ತಾನೆ
★ವನಸ್ಥಲೀ ವಿದ್ಯಾಪೀಠ – *ಸಾ ವಿದ್ಯಾ ಯಾ ವಿಮುಕ್ತಯೆ* – ಯಾವ ವಿದ್ಯೆ ನಮ್ಮನ್ನು ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.
★ಎನ್.ಸಿ.ಇ.ಆರ್.ಟಿ – *ವಿದ್ಯಯಾ ಅಮೃತಮಶ್ನುತೇ*
★ಕೇಂದ್ರೀಯ ವಿದ್ಯಾಲಯ – *ತತ್ ತ್ವಂ ಪೂಷನ್ ಅಪಾವೃಣು*
★ಸಿ.ಬಿ,ಎಸ್.ಇ – *ಅಸತೋ ಮಾ ಸದ್ಗಮಯ* – ಕತ್ತಲಿನಿಂದ ಬೆಳಕಿನೆಡೆಗೆ.
★ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – *ಕರ್ಮ ಜ್ಯಾಯೋ ಹಿ ಅಕರ್ಮಣಃ* – ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.
★ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – *ಧಿಯೋ ಯೋನಃ ಪ್ರಚೋದಯಾತ್* –
ಸದ್ಬುದ್ಧಿ ನಮ್ಮನ್ನು ಪ್ರಚೋದಿಸಲಿ.
★ಮದನ್ ಮೋಹನ ಮಾಲವೀಯ ತಾಂತ್ರಿಕ
ಮಹಾವಿದ್ಯಾಲಯ – *ಯೋಗಃ ಕರ್ಮಸು ಕೌಶಲಮ್*
★ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – *ಸಂಗಚ್ಛಧ್ವಂ ಸಂವದಧ್ವಮ್* - ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.
★ರಾಷ್ಟ್ರೀಯ ಕಾನೂನು ವಿದ್ಯಾಲಯ – *ಧರ್ಮೋ ರಕ್ಷತಿ ರಕ್ಷಿತಃ* – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
______________________________________