ನಾಮಧಾರಿ ನಾಯ್ಕ ಈ ಸಮಾಜದ ಇತಿಹಾಸದ ಅವಲೋಕನದ ಸಣ್ಣ ಪ್ರಯತ್ನ

ಕ್ರಪೆ - ಸತೀಶ ನಾಯ್ಕ ಭಟ್ಕಳ.


ಹಳೆಪೈಕ :
ಹಳೆ ಅಂದರೆ ಪುರಾತನ, ಮೂಲತಃ,
ಪೈಕ ಅಂದರೆ ಗುಂಪು , ಒಕ್ಕೂಟ, ಕೂಟ, ಸಂಘ,
ಹಳೆಪೈಕ ಅಂದರೆ ಪುರಾತನ ಒಕ್ಕೂಟ, ಮೂಲ ಒಕ್ಕೂಟ ಎಂದಾಗುತ್ತದೆ.
ದೀವ ಅಂದರೆ ಬೆಳಕು, ಜ್ಞಾನ, ದೀಪ, ಜ್ಯೋತಿ.
ದೀವರು ಅಂದರೆ ಜ್ಞಾನವಂತರು.
ದೀವರು ನಾಯ್ಕ ಅಂದರೆ ವೀರತ್ವದ ಬೆಳಕಿನಡೆಗೆ ನಡೆಸುವ ನಾಯಕರು ಅಥವಾ ಯಜಮಾನರು.
ನಾಯ್ಕ ಅಂದರೆ ನಾಯಕ , ಮುಖಂಡ, ಮುಖ್ಯಸ್ಥ, ಯಜಮಾನ, ಕ್ಷತ್ರಿಯ.
ನಾಮಾಧಾರಿ ಅಂದರೆ ತಿಲಕವನ್ನು ಧರಿಸುವವನು,
ಪುರಾತನ ಕಾಲದಿಂದಲು ಪುರಾತನವಾದ ಒಕ್ಕೂಟವನ್ನು ಹೊಂದಿದ ಜನಾಂಗವನ್ನು ಅಥವಾ ಸಮುದಾಯವನ್ನು ಅಥವಾ ಪಂಗಡವನ್ನು ಅಥವಾ ವೀರರ ಒಕ್ಕೂಟವನ್ನು  ಹಳೆಪೈಕ ಎಂದು ಕರೆಯಲಾಗುತ್ತದೆ.
2017-01-23-08-54-41-568450590ಇಲ್ಲಿ ವಿಶ್ಲೇಣಾತ್ಮಕವಾಗಿ ಹೇಳ ಬೇಕೆಂದರೆ ಒಂದು ಸಮುದಾಯ ಅಥವಾ ಜನಾಂಗ ಒಗ್ಗಟ್ಟಿನಲ್ಲಿ ಒಕ್ಕೂಟವನ್ನು ಮಾಡಿ ಕೊಳ್ಳ ಬೇಕೆಂದರೆ ಆ ಜನಾಂಗದವರಲ್ಲಿ ಸಂಘಟನಾತ್ಮಕವಾದ ಮನೋಭಾವ ಸಂಘಟಿಸುವ ಶಕ್ತಿ ಇರಬೇಕಾಗುತ್ತದೆ. ಯಾವುದೇ ಸಂಘಟನೆಯನ್ನು ಮಾಡ ಬೇಕಾದರು ಅವರಲ್ಲಿ ಮುಖ್ಯವಾಗಿ ನಾಯಕತ್ವದ ಮುಂದಾಳತ್ವ ವಹಿಸುವ ಜ್ಞಾನವಿರಲೇ ಬೇಕಾಗುತ್ತದೆ.ಎಲ್ಲಾವನ್ನು ಯಶಸ್ವಿಯಾಗಿ ನಿಭಾಯಿಸುವ ಜ್ಞಾನ ವೀರತ್ವ  ಇರಬೇಕಾಗುತ್ತದೆ. ಮತ್ತು ಅವರು ವೀರರು ಪರಾಕ್ರಮಿಶಾಲಿಗಳು ಆಗಿರಲೇ ಬೇಕಾಗುತ್ತದೆ.ಈ ವೀರತ್ವ ಮತ್ತು ಪರಾಕ್ರಮಿಶಾಲಿಗಳು ಆಗಿರುವವರು ಕ್ಷತ್ರಿಯರು ಮಾತ್ರ ಆಗಿರಲೂ ಮಾತ್ರ ಸಾಧ್ಯ. ಇಲ್ಲಿಗೆ ಹಳೆಪೈಕ ಎಂದರೆ ಕ್ಷತ್ರಿಯರು ಎನ್ನುವುದು ಎಲ್ಲರು ನಂಬಲೇ ಬೇಕಾದ ಸತ್ಯವಾಗಿ ಕಾಣುತ್ತದೆ. ಇಂದಿಗೂ ಭಟ್ಕಳದ ದೀವರಾದ ನಾಮಧಾರಿ ನಾಯ್ಕರಲ್ಲಿ ಒಕ್ಕೂಟ ಪದ್ದತಿ (ಕೂಟ) ಜಾರಿಯಲ್ಲಿರುವುದು ಅಳಿದುಳಿದ ಅವಶೇಷಗಂತೆ ಕಂಡುಬರುತ್ತಿದೆ.
ಇದರಿಂದ ನಮಗೆ ತಿಳಿಯಲ್ಪಡುವುದು ಹಳೆಪೈಕರು ಕ್ಷತ್ರಿಯ ಜನಾಂಗವಾಗಿತ್ತು. ಮತ್ತು ಪುರಾತನ ಕಾಲದಿಂದಲೂ ಯಜಮಾನರಾಗಿ ಅರಸರಾಗಿ ಆಡಳಿತ ನಡೆಸಿಕೊಂಡು ಬಂದವಾರಾಗಿರುತ್ತಾರೆ. ಹಾಗೂ ಕಾಲದ ಹೊಡೆತಕ್ಕೆ ಸಿಲುಕಿ ಅಂದರೆ ಯುದ್ಧದ ಸಮಯದಲ್ಲಿ ಹೋರಾಡಿ ವೀರ ಮರಣವನ್ನೋಪ್ಪಿ ಸೋತಾಗ ಬದುಕುಳಿದ  ಸ್ತ್ರೀಯರು ಹಾಗೂ ಸಣ್ಣ ಸಣ್ಣ ಮಕ್ಕಳೊಂದಿಗೆ ಮತ್ತು ವಯಸ್ಸಾದ ಹಿರಿಯರೊಂದಿಗೆ ತಮ್ಮ ಮನೆ ಮಠವನ್ನೆಲ್ಲಾವನ್ನು ಬಿಟ್ಟು ಪಶ್ಚಿಮ ಘಟ್ಟದ ಕರಾವಳಿ ಹಾಗು ಮಲೆನಾಡಿನ ದಟ್ಟ ಕಾಡುಗಳಲ್ಲಿ ಅಲೆದಾಡಿ ಸಣ್ಣ ಪುಟ್ಟ ಗುಡಿಸಲುಗಳನ್ನ ಕಟ್ಟಿಕೊಂಡು ದಟ್ಟವಾದ ಅರಣ್ಯದಲ್ಲಿ ಆಶ್ರಯವನ್ನು ಪಡೆದಂತೆ ಕಂಡು ಬರುತ್ತದೆ.
ಹೀಗೆ ಮುಂದುವರೆದು ಮನೆಮಠ ಕಳೆದುಕೊಂಡು ಕಷ್ಟ ಕಾರ್ಪಣ್ಯಗಳಿಂದ ಜೀವನ ಸಾಗಿಸುತ್ತಿರುವ ದೀವರ ಸಮೂದಾಯಗಳ ಜನರನ್ನು ಕಾಡಿನಲ್ಲಿ (ಕಾನನದಲ್ಲಿ) ವಾಸವಾಗಿದ್ದವರನ್ನ ಕಾನದೀವರು ಹಾಗೂ ತೆಂಕಣದಲ್ಲಿ ವಾಸವಾಗಿದ್ದವರನ್ನ (ತೆಂಕಣ ದಿಕ್ಕು (ತೆಂಕ್ ದಿಕ್ಕು)  ಇದರ ಅಪಭ್ರಂಶವಾಗಿ ತೆಂಗ ಬಂದಿರಬೇಕು) ತೆಂಗ ದೀವರು ಎಂದು ಗುರುತ್ತಿಸಿ ಕರೆದಿರಬೇಕು.ಹೀಗೆ ಮುಂದೆ ಮೂರ್ನಾಲ್ಕು  ತಲೆಮಾರುಗಳು ದಟ್ಟವಾದ ಕಾಡುಗಳಲ್ಲಿ ಅಲೆದಾಡಿ ಜೀವನೋಪಾಯಕ್ಕಾಗಿ ಕೃಷಿಯನ್ನು ಹಾಗೂ ಕಾಡುಗಳಲ್ಲಿ ಬೇಟೆಯಾಡಿ ಮತ್ತು ಕಾಡಿನಲ್ಲಿರುವ ತಾಳೆಮರದ ಕಾಂಡವನ್ನು ಕುಟ್ಟಿ ಪುಡಿಮಾಡಿ ಅದರ ಹಿಟ್ಟಿನಿಂದ ತಾಳೆ ಹಿಟ್ಟಿನ ಗಂಜಿ ಮಾಡಿ ಕುಡಿದು ಜೀವನ ಸಾಗಿಸಿದ ಹಾಗೆ ಕಂಡು ಬರುತ್ತಿದೆ. ಹೀಗೆ ಜೀವನ ಸಾಗಿಸುವುದೇ ಕಷ್ಟವಾದಾಗ ಕ್ಷತ್ರಿಯ ವಿದ್ಯೆಗಳಿಂದ ವಂಚಿತರಾಗಿ  ಮುಂದೆ ಇವರುಗಳು ತಮ್ಮ ಅಸಹಯಕತೆಯ ಪರಿಸ್ಥಿತಿಯಿಂದ ಇತರರಿಂದ ದೌರ್ಜನ್ಯಕ್ಕೆ ಒಳಗಾಗಿ  ಬದುಕನ್ನು ಸಾಗಿಸಿದ ಹಾಗೆ ಕಂಡುಬರುತ್ತಿದೆ.
ಮೂಲimagesತಃ ಇವರುಗಳು ತಿರುಪತಿಯ ತಿರುಮಲ ತಿಮ್ಮಪ್ಪನ ಭಕ್ತರಾದ ಇವರು ಮುಂದೆ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ ವೈಷ್ಣವರಾಗಿ ನಾಮಧರಿಸುವುದರ ಮೂಲಕ ನಾಮಧಾರಿಗಳಾದಂತೆ ಕಂಡು ಬರುತ್ತಿದೆ. ಬಹುತೇಕವಾಗಿ ಎಲ್ಲಾ ಶೂದ್ರ ವರ್ಗಗಳು ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾದ ಸಂದರ್ಭದಲ್ಲಿ ಕ್ಷತ್ರಿಯ ಕುಲದವರಾದ ದೀವರು ಸಹ ಅವರಂತೆ ಶೂದ್ರರು ಎನಿಸಿ ಕೊಂಡಂತೆ ಕಂಡು ಬರುತ್ತದೆ.ಮುಂದೆ ನೂರಾರು ವರುಷ ದೌರ್ಜನ್ಯಕ್ಕೆ ಒಳಗಾಗಿ ಬಡತನದಿಂದ ಜೀವನ ಸಾಗಿಸಿ ಉಳ್ಳವರ ಹಾಗೂ ಕಂಡವರ ಜಮೀನುಗಳನ್ನು ಗೇಣಿಗೆ ತೆಗೆದುಕೊಂಡು ಹಾಗೂ  ಕಾಡಿನಲ್ಲಿರುವ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಊರಿನವರಿಗೆಲ್ಲಾ ಹಂಚಿಕೊಂಡು ಅಡುಗೆ ಮಾಡುತ್ತಿದ್ದರು ಮತ್ತು  ಊಟಕ್ಕೆ ಅನ್ನ ಇಲ್ಲದಿದ್ದರು ಕಾಡಿನಲ್ಲಿರುವ ತಾಳೆ ಮರದ ಕಾಂಡವನ್ನು ತಂದು ಪುಡಿ ಮಾಡಿ ಹಿಟ್ಟನ್ನಾಗಿಸಿ ನೀರಿನಲ್ಲಿ ಕುದಿಸಿ ಗಂಜಿ (ಅಂಬಲಿ) ಮಾಡಿ ಕುಡಿದು ಸ್ವಾಬಿಮಾನದಿಂದ ಜೀವನ ನಡೆಸಿದಂತೆ ಕಂಡು ಬರುತ್ತಿದೆ. ಇವರು ದೇವರ ಹೆಸರಲ್ಲಿ ಅಮಾಯಕ ಜನರಿಗೆ ಮೋಸ ಮಾಡಿ ಜೀವನ ಸಾಗಿಸಿರೋದು ಎಲ್ಲೂ ಕಂಡು ಬರುವುದಿಲ್ಲಾ…..
ಬ್ರಿಟಿಶ್ ಆಡಳಿತದ ಕಾಲದಲ್ಲಿ ಹಳೆಪೈಕ ಹಾಗು ಕೊಮಾರ ಪೈಕ ಇವೆರಡು ಪಂಗಡದವರು ಮೂಲತಃ ಯೋಧರಾಗಿದ್ದು, ಬ್ರಿಟೀಶರಿಗ ಸಿಂಹ ಸಿಂಹ ಸ್ವಪ್ನವಾಗಿದ್ದರೆಂಬ ಖ್ಯಾತಿಯನ್ನು ಹೊಂದಿದ, ಸಮಸ್ಯಾತ್ಮಕ ಬುಡಕಟ್ಟಿನವರಾಗಿ ತಲೆದೋರಿದ್ದರು. ಒಂದಾನೊಂದು ಕಾಲದಲ್ಲಿ, ವಿಜಯನಗರದ ಅರಸರಿಗೆ ಹಾಗು ಕರಾವಳಿಯ ಪಾಳೆಗಾರರಿಗೆ ಸೈನ್ಯಕ್ಕೆ ಯೊಗ್ಯವಾದ ಹಿನ್ನೆಲೆಯನ್ನುಳ್ಳ ಜನಾಂಗವಾಗಿದ್ದವು. ಈ ಜಾತಿಯ ಮೂಲಸ್ಥಳದ ಬಗ್ಗೆ ಯಾವುದೆ ಮಾಹಿತಿ ಸಿಗುವುದಿಲ್ಲ.ಇದರ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ. ಮತ್ತು ಅದರ ಬಗ್ಗೆ ನಿರಂತರವಾದ ಪ್ರಯತ್ನವು ನಡೆಯುತ್ತಿದೆ.
ಆದರೆ ಈ ಜನಾಂಗದ ಒಂದು ಪಂಗಡದ ಒಬ್ಬ ಸ್ವಾಮಿ ಅಥವಾ ಗುರು,ವಿಜಯನಗರದ ಆನೆಗುಂದಿಯಲ್ಲಿದ್ದನೆಂಬ ಆಧಾರದ ಮೇಲೆ ಈ ಜನಾಂಗದ ಸಂಪ್ರದಾಯವು ವಿಜಯನಗರ ಸಾಮ್ರಜ್ಯಕ್ಕೆ ಸಂಬಂಧಿಸಿದಂತೆ ಕಾಣುತ್ತದೆ. ಬಹುಶಃ ವಿಜಯನಗರ ಸಾಮ್ರಾಜ್ಯದ ಭಾಗದ ಹಿಂದೂ ಸಮ್ರಾಜ್ಯದಲ್ಲಿ ಸೇನಾ ನಾಯಕರರಾಗಿದ್ದರೆಂದೂ ಅತ್ಯುತ್ತಮ ಸೈನಿಕ ತುಕಡಿಯನ್ನು ಹೊಂದಿದ ಪಡೆಯವರಾಗಿದ್ದರೆಂದೂ ಊಹಿಸಲಾಗಿದೆ. ವರ್ತಮಾನದಲ್ಲಿ ಅವರು ಕರಾವಳಿ ತಾಲ್ಲೂಕುಗಳಾದ ಅಂಕೋಲಾ,ಕುಮಟ,ಹೊನ್ನಾವರ ಹಾಗೂ ಘಟ್ಟದ ಮೇಲಿನ ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ವ್ಯಾಪಕವಾಗಿ ಇದ್ದಾರೆ.
fb_img_1485142250593ಹಳೆಪೈಕರ ಗುರುವಾದ ಮೈಸೂರು ಪ್ರಾಂತ್ಯದ, ಸಾಗರದ ಲೋಕಾಚಾರ್ಯನು ಇವರ ಮೂಲದ ಬಗ್ಗೆ ಒಂದು ಕತೆಯನ್ನು ಹೇಳುತ್ತಾನೆ: ಹೊಯ್ಸಳರ ಅರಸು ವೀರನರಸಿಂಹ ೨ ಭೂಪಾಲನ ಕಾಲದಲ್ಲಿ ಅವರ ಸೇವಕನಾದ ರಂಗನಾಯ್ಕ ಹಾಗೂ ಅವನ ಹೆಂಡತಿ ಭಾಮಿನಿಗೆ ಶ್ರೀಲಕ್ಷ್ಮಿಯ ಅನುಗ್ರಹದಿಂದ ಒಂದು ಗಂಡು ಮಗುವಾಗುತ್ತದೆ. ಅದು ಕುಮಾರಕ್ಷೇತ್ರ ಎನ್ನುವ ಸ್ಥಳ. ಸುಮಾರು ೧೧೪೩ನೇ ಶಖ ವರ್ಷದಲ್ಲಿ(ಸೂಮಾರು೧೨೨೫ ಇಸವಿ) ಕಾರ್ತಿಕದ ಏಳನೇ ದಿನ ಆ ಮಗುವಿಗೆ ನಾರಾಯಣ ಎಂದು ಹೆಸರಿಡುತ್ತಾರೆ. ಒಂದು ದಿನ ನಾರಾಯಣನೆಂಬ ಆ ಮಗು ಬೀದಿಯಲ್ಲಿ ಆಡುತ್ತಿರುವಾಗ  ಹೊಯ್ಸಳರ ಅರಸು ವೀರನರಸಿಂಹ ೨ ಭೂಪಾಲನ ಮಗ ವೀರ ಸೋಮೇಶ್ವರ ರಾಜನು ರಥದ ಮೇಲೆ ಆ ಹಾದಿಯಲ್ಲಿ ಹಾದು ಹೋಗುತ್ತಿರುವಾಗ ಈ ಮಗುವನ್ನು ನೋಡುತ್ತಾನೆ. ಆ ಮಗುವಿನಲ್ಲಿದ್ದ ರಾಜಕಳೆಯನ್ನು ನೋಡಿ, ಎತ್ತಿಕೊಂಡು ಹೋಗಿ ಅರಮನೆಯಲ್ಲಿ ಬೆಳೆಸುತ್ತಾನೆ. ಆ ಮಗುವಿನ ಹದಿನಾರನೆ ವಯಸ್ಸಿಗೆ, ರಾಜಕುಮಾರನಿಗೆ ಕೊಡಿಸುವ ಶಿಕ್ಷಣವನ್ನು ಕೊಡಿಸುತ್ತಾನೆ. ಅವನನ್ನು ಆಡಳಿತದಲ್ಲಿ ಪ್ರಮುಖ ವಿಷಯಗಳನ್ನು ನಿರ್ವಹಿಸಲು ನೇಮಕ ಮಾಡಲಾಗುತ್ತದೆ. ನಂತರ ಅವನನ್ನು ಸೇನಾದಂಡನಾಯಕನನ್ನಾಗಿ ಮಾಡುತ್ತಾರೆ. ಅವನ ಅಪ್ರತಿಮ ಸಾಹಸ ಕಾರ್ಯವನ್ನು ಮೆಚ್ಚಿ ಗೌರವಿಸಲಾಗುತ್ತದೆ. ಈ ಸಮಯದಲ್ಲಿ, ನಾರಾಯಣನ ತಂದೆ ರಂಗನಾಯ್ಕನು ಹೇಗೋ ಮಾಡಿ ನಾರಾಯಣನನ್ನು ಭೇಟಿ ಮಾಡುತ್ತಾನೆ. ನಾರಾಯಣನಿಗೆ , ರಂಗನಾಯ್ಕ ಹಾಗೂ ಭಾಮಿನಿಯ ಕಳೆದು ಹೋದ ಮಗ ತಾನೆ ಎಂದು ಗೊತ್ತಾಗುತ್ತದೆ. ರಂಗನಾಯ್ಕನು ಮಗನನ್ನು ಕಳೆದುಕೊಂಡ ಚಿಂತೆಯಲ್ಲಿ ಸೊರಗಿ ಹೋಗಿರುತ್ತಾನೆ. ವೀರ ಸೋಮೇಶ್ವರನಿಗೆ ನಾರಾಯಣನ ದೈನ್ಯತೆಯ ಮೂಲ ತಿಳಿಯುತ್ತದೆ. ನಂತರ ರಾಜನು, ನಾರಾಯಣನಿಗೆ ಟಂಕಶಾಲೆಯ ಉಸ್ತುವಾರಿಯನ್ನು ವಹಿಸಿಕೊಟ್ಟು, “ಹಳೆಪೈಕ” (ಹಳೆಬೀಡುವಿನ ಸುತ್ತಲಿನ ಪ್ರದೇಶ ಇರಬಹುದು) ಎಂಬ ಹಳ್ಳಿಯನ್ನು ಅವನಿಗೂ ಹಾಗೂ ಅವನ ಪೂರ್ವಜರಿಗೂ ಅನುಭವಿಸಲು ಜಾಗೀರು ಕೊಡುತ್ತಾನೆ. ಈ ಸಮಯದಲ್ಲಿ ನಾರಾಯಣನ ವಂಶಸ್ಥರಲ್ಲಿ ಕೆಲವರು ಯಾತ್ರೆಗೆ ಹೋಗುತ್ತಾರೆ. ಅವರು ರಾಮೇಶ್ವರ, ಕಾಶಿ, ತಿರುಪತಿ, ಶ್ರೀರಂಗ, ಉಡುಪಿ, ಗೋಕರ್ಣ ಹಾಗೂ ಹೊಯ್ಸಳರ ಸಾಮಂತರಾದ ಇಕ್ಕೇರಿಯ ವೆಂಕಟಪ್ಪನಾಯ್ಕ ಹಾಗೂ ಕೆಳದಿ ಸಂಕಣ್ಣನಾಯ್ಕನ ಆಸ್ಥಾನಕ್ಕೂ ಬೇಟಿ ಕೊಡುತ್ತಾರೆ. ಅಲ್ಲಿ, ಅವರನ್ನು ಆನೆಗುಂದಿ ಹಾಗೂ ಚಂದಾವರದ ಆಸ್ಥಾನದಲ್ಲಿ ಪ್ರಮುಖ ಖಾತೆಗಳನ್ನು ಕೊಟ್ಟು! ಇರಿಸಿಕೊಳ್ಳಲಾಯಿತು. ಆದ್ದರಿಂದ ಅವರು ಕುಮಟ ತಾಲ್ಲೂಕಿನ ಚಂದಾವರದಲ್ಲಿ ವಾಸಿಸತೊಡಗಿದರು. ಹಳೆಪೈಕರು ಸುಸಂಘಟಿತ ಸಮುದಾಯವಾಗಿದ್ದು ತಮ್ಮ ಸರಹದ್ದನ್ನು ಹದಿನಾಲ್ಕು (ಒಕ್ಕೂಟ) ಸೀಮೆಗಳಾಗಿ ಅಂದರೆ ಹೋಬಳಿಗಳಾಗಿ (ಒಕ್ಕೂಟಗಳಾಗಿ) ವಿಭಜಿಸಿಕೊಂಡಿದ್ದಾರೆ. ಅವುಗಳು ಕರಾವಳಿ ಹಳೆಪೈಕರ ಸೀಮೆಗಳು (ಒಕ್ಕೂಟ):
fb_img_1485142239745೧] ಚಂದಾವರ ೨] ಮಿರ್ಜನ ೩] ಗೇರುಸೊಪ್ಪ ೪] ಅಂಕೋಲ ೫) ಭಟ್ಕಳದ ಮಾವಳ್ಳಿ  ೬) ಭಟ್ಕಳದ ಸೂಸಗಡಿ
ಈ ಆರು ಸೀಮೆಗಳಲ್ಲಿ ಚಂದಾವರ ಸೀಮೆಯು ಮೊದಲಿನದು. ಚಂದಾವರದ ಹತ್ತಿರದಲ್ಲಿರುವ ಕೋನಳ್ಳಿ ಈ ಜನಾಂಗದ ಕೇಂದ್ರ ಸ್ಥಳ. ಇದಕ್ಕೆ ತಾಯಿಸ್ಥಳ ಎನ್ನುತ್ತಾರೆ. ಇವರ ಪ್ರತಿಯೊಂದು ಸೀಮೆಯಲ್ಲಿ (ಹೋಬಳಿಯ ಒಕ್ಕೂಟ) ಒಂದೊಂದು ಒಕ್ಕೂಟ ಇರುತ್ತದೆ, ಮತ್ತು ಒಕ್ಕೂಟದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕುಲದೇವರ ದೇವಸ್ಥಾನದಲ್ಲಿ ನಡೆಯುತ್ತದೆ. ಪ್ರತಿದೇವಾಲಯದಲ್ಲೂ ಒಂದು ಗುರು ಪೀಠವು ಇರುತ್ತದೆ. ಈ ಗುರು ಪೀಠದಲ್ಲಿ ಗುರುಗಳು ಕುಳಿತುಕೊಂಡು ತಮ್ಮ ಅನುಯಾಯಿಗಳಿಗೆ ಪ್ರವಚನವನ್ನು ನೀಡಲಾಗುತ್ತಿತ್ತು ಎಂದು ತಿಳಿಯಲಾಗಿದೆ.
ಘಟ್ಟದ ಮೇಲಿನ ಹಳೆಪೈಕರ ಸೀಮೆಗಳು .
೧) ಯಲ್ಲಾಪುರ 2) ಸೋಂದ೩) ಕರೂರು೪) ಸಿರಸಿ ೫) ಹೇಳೂರು ೬) ಬನವಾಸಿ ೭) ಇಸ್ಲೂರು ೮) ಬಿಳಗಿ ಈ ಎಂಟು ಸೀಮೆಗಳಲ್ಲಿ ಬಿಳಗಿ ಸೀಮೆಗೆ ಉನ್ನತ ಸ್ಥಾನವಿದೆ. ಇದರ ಕೇಂದ್ರ ಸ್ಥಳ ಬೆಲ್ಲಹಳ್ಳಿ (ಬೆಲ್ಹಾಳಿ-BELLHALI). ಅಲ್ಲೊಂದು ಮಠವಿದ್ದು ಅಲ್ಲಿ ಒಬ್ಬ ತ್ರಿನಾಮಧಾರಿ ಗುರುವಿರುತ್ತಾನೆ. ಒಂದೊಂದು ಸೀಮೆಗೂ (ಒಕ್ಕೂಟಕ್ಕೂ) ಹಲವಾರು ಹಳ್ಳಿಗಳು ಸೇರುತ್ತವೆ. ಪ್ರತಿ ಸೀಮೆಗೆ (ಕೂಟಕ್ಕೂ) “ಬುದ್ದವಂತ”ನೆಂಬ ಮುಖ್ಯಸ್ಥನಿರುತ್ತಾನೆ.( ಮುಖ್ಯಸ್ಥ್ಯನಾಗುವುದು ವಂಶ ಪಾರಂಪರ್ಯವಾಗಿ). ಈ ಜನಾಂಗದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸೇರುವ ಸಭೆಗೆ ಇವನೇ ಮುಖ್ಯಸ್ಥನಾಗಿರುತ್ತಾನೆ. ಪರಿಹರಿಸಲಾಗದ ಸಮಸ್ಯೆಗಳನ್ನು ಯಜಮಾನನಿಗೆ ವಹಿಸಲಾಗುತ್ತದೆ. ಯಜಮಾನ ಹಲವು ಸೀಮೆಗಳಿಗೆ ಮುಖ್ಯಸ್ಥನಾಗಿರುತ್ತಾನೆ.
ಮಲೆನಾಡಿನ ಹಳೆಪೈಕರ (ದೀವರ) ಸೀಮೆಗಳು :
ಸಾಗರ, ಸೊರಬ ಹಾಗೂ ಸಿದ್ದಾಪುರ ಮತ್ತು ಶಿರಸಿ ತಾಲ್ಲೂಕುಗಳ ದೀವರಲ್ಲಿ ಸುಧಾರಣಾವಾದಿ ನಾಯಕರುಗಳು ಸೇರಿ 1931ರಲ್ಲಿ ಪುರಾತನ ನಾಮಧಾರಿ ವಿಷ್ಣುಭಕ್ತರ ಸಂಘವನ್ನು ರಚನೆ ಮಾಡಿದ್ದು, ಅದೇ ವರ್ಷ ದಿನಾಂಕ 02.03.1931ರಂದು ಸಂಘದ ಪ್ರಥಮ ಮಹಾಸಭೆಯನ್ನು ಸಿದ್ದಾಪುರ ತಾಲ್ಲೂಕು ಕೋಲಸಿರ್ಸಿಯಲ್ಲಿ ಕರೆಯಲಾಗಿತ್ತು. ಕರ್ನಾಟಕ ವಿಷ್ಣುಭಕ್ತ ನಾಮಧಾರಿ ಸಮಾಜದ ಸುಧಾರಣಾವಾದಿಗಳು ಸೇರಿ ಈ ಮಹಾಸಭೆಯಲ್ಲಿ ಮಹತ್ವವಾದ ನಿರ್ಣಯಗಳನ್ನು ಮಾಡಿದ್ದಾರೆ. ಸಾಗರ, ಸೊರಬ ಹಾಗೂ ಸಿದ್ದಾಪುರ ಮತ್ತು ಶಿರಸಿ ತಾಲ್ಲೂಕುಗಳನ್ನು ಹದಿನೇಳು ಸೀಮೆಗಳನ್ನಾಗಿ ವಿಂಗಡಿಸಿದ್ದಾರೆ. ಅವು ಹೀಗಿವೆ.
1) ಬಿಳಗಿ ಸೀಮೆ   2) ಕೆಳದಿ ಸೀಮೆ  3) ಕ್ಯಾಸನೂರು ಸೀಮೆ  4) ಚಿಟ್ಟೂರು ಸೀಮೆ   5) ಇಕ್ಕೇರಿ ಸೀಮೆ   6) ಬೆಳಂದೂರು ಸೀಮೆ  7) ಹೊಸಗುಂದ ಸೀಮೆ   8) ಶಿರವಂತೆ ಸೀಮೆ  9) ಆವಿನಹಳ್ಳಿ ಸೀಮೆ 10) ತವನಂದಿ ಸೀಮೆ
11) ಸೊರಬ ಸೀಮೆ  12) ಕರೂರು ಸೀಮೆ 13) ಗುತ್ತಿ ಸೀಮೆ  14) ಮಳಲಿ ಸೀಮೆ15) ಅಂಡಿಗೆ ಸೀಮೆ 16) ಹೇರೂರು  ಸೀಮೆ 17) ತೋಟ ಸೀಮೆ.
               ಈ ಹದಿನೇಳು ಸೀಮೆಗಳನ್ನು ಕಟ್ಟೆಗಳಾಗಿ ವಿಂಗಡಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ.
1) ಹೊಸೂರು   2) ಕೋಲಸಿರ್ಸಿ 3) ಹಾಸಣಗಿ 4) ಸೆಟ್ಟಳ್ಳಿ  5) ಬೂದಗಿತ್ತಿ  6) ಕಾನಲೆ  7) ಹರೀಶಿ ಮಂಗಳೂರು         8) ಗೋಣುರು.
ಪುರಾತನ ನಾಮಧಾರಿ ವಿಷ್ಣುಭಕ್ತರ ಸಂಘ ಸಾಗರ, ಸೊರಬ ಹಾಗೂ ಸಿದ್ದಾಪುರ ಮತ್ತು ಶಿರಸಿ ತಾಲ್ಲೂಕುಗಳ ವ್ಯಾಪ್ತಿಯನ್ನು ಹೊಂದಿದ್ದು ಈ ನಾಲ್ಕು ತಾಲ್ಲೂಕುಗಳನ್ನು ಹದಿನೇಳು ಸೀಮೆಗಳು ಮತ್ತು ಎಂಟು ಕಟ್ಟೆಗಳನ್ನಾಗಿ ವಿಭಾಗ ಮಾಡಿಕೊಂಡಿದ್ದಾರೆ. ಪ್ರಥಮ ಮಹಾಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯಗಳನ್ನು ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈಗ್ಯೆ ಎಂಭತೈದು ವರ್ಷಗಳ ಹಿಂದಿನಿಂದಲೂ ಸುಧಾರಣಾವಾದಿಗಳು ಸಮಾಜದ ಬದಲಾವಣೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಕೋಲ ಸಿರ್ಸಿಯಲ್ಲಿ ನಡೆದ ಪ್ರಥಮ ಮಹಾಸಭೆಯ ಅಧ್ಯಕ್ಷತೆಯನ್ನು ಆ ಕಾಲದಲ್ಲಿ ಬುದ್ಧಿವಂತರಾಗಿದ್ದ ಸಿದ್ದಾಪುರ ತಾಲ್ಲೂಕು ಶಿರಳಗಿ ಗ್ರಾಮ ಶ್ರೀ ಗೋವಿಂದ ಪುಟ್ಟನಾಯ್ಕರು ವಹಿಸಿದ್ದರು.
ದ್ವಿತೀಯ ಮಹಾಸಭೆ ದಿನಾಂಕ 26.03.1932ರಂದು ಸಾಗರ ತಾಲ್ಲೂಕು ಮರತ್ತೂರು ಗ್ರಾಮದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಶ್ರೀ ಬಿಷ್ಟಪ್ಪ ದ್ಯಾವಪ್ಪ, ಸೊರಬ ತಾಲ್ಲೂಕು ಇವರು ವಹಿಸಿದ್ದರು. ಈ ಸಭೆಯಲ್ಲಿ ನಾಲ್ಕು ತಾಲ್ಲೂಕುಗಳಿಂದ ಸುಮಾರು ಒಂದೂವರೆ ಸಾವಿರ ಜನರು ಸೇರಿದ್ದರು. ಎಂಭತ್ತು ವರ್ಷಗಳ ಹಿಂದೆ ಜನಾಂಗೀಯ ಸುಧಾರಣೆ ಸಭೆಗೆ ಬೇರೆ ಬೇರೆ ತಾಲ್ಲೂಕುಗಳಿಂದ ಒಂದೂವರೆ ಸಾವಿರ ಜನರು ಸೇರಿದ್ದರು ಎಂದರೆ ಆಶ್ಚರ್ಯಪಡುವ ವಿಚಾರವಾಗಿದೆ. ಜಾತಿಯ ಸುಧಾರಣೆ ಬಗ್ಗೆ ಜನಕ್ಕೆ ಇರುವ ಕಾಳಜಿಯನ್ನು ಇದು ಎತ್ತಿ ತೋರಿಸುತ್ತದೆ. 1931 ಮತ್ತು 1932ರಲ್ಲಿ ನಡೆದ ಮಹಾಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಎರಡು ಪುಸ್ತಿಕಗಳಲ್ಲಿ ಪ್ರಕಟಿಸಿರುವುದು ಅಂದಿನ ಜನಾಂಗದ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಈ ಪುಸ್ತಿಕೆಗಳಲ್ಲಿರುವ ಕೆಲವು ಭಾಗಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ದಿನಾಂಕ 02.03.1931ರಂದು ಸಿದ್ದಾಪುರ ತಾಲ್ಲೂಕು ಕೋಲಸಿರ್ಸಿಯಲ್ಲಿ ನಡೆದ ಪ್ರಥಮ ಮಹಾಸಭೆಯಲ್ಲಿ ಸಾಗರ, ಸೊರಬ, ಸಿದ್ದಾಪುರ, ಶಿರಸಿ ಈ ನಾಲ್ಕು ತಾಲ್ಲೂಕುಗಳನ್ನು ಹದಿನೇಳು ಸೀಮೆಗಳು ಮತ್ತು ಎಂಟು ಕಟ್ಟೆಗಳನ್ನಾಗಿ ವಿಂಗಡಿಸಿ ಮುಖ್ಯವಾಗಿ ನಾಮಧಾರಿ ವಿಷ್ಣುಭಕ್ತರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿಯನ್ನು ರಚನೆ ಮಾಡಲಾಗಿದೆ ಮತ್ತು ಹದಿನೇಳು ಸೀಮೆಗಳಿಗೆ, ಎಂಟು ಕಟ್ಟೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
1931ರ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ದೀವರ ಸುಧಾರಣೆಗೆ ಪ್ರಯತ್ನ ನಡೆದಂತೆ ಕಾಣುವುದಿಲ್ಲ. ಈ ಬಗ್ಗೆ ದಾಖಲೆಗಳೂ ದೊರಕುವುದಿಲ್ಲ. 1931ರಲ್ಲಿ ಪ್ರಾರಂಭಗೊಂಡ ನಾಮಧಾರಿ ವಿಷ್ಣುಭಕ್ತರ ಸಂಘದ ಕಾರ್ಯಕ್ರಮಗಳ ಬಗ್ಗೆ ಎರಡು ಪುಸ್ತಿಕೆಗಳನ್ನು ಪ್ರಕಟಿಸಿರುವುದನ್ನು ಬಿಟ್ಟರೆ ಬೇರೆಯಾದ ದಾಖಲೆಗಳು ಕಂಡುಬರುವುದಿಲ್ಲ. ಈ ಸಂಘದ ಪದಾಧಿಕಾರಿಗಳು ದೀವರು ದಟ್ಟವಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಈ ನಾಲ್ಕು ತಾಲ್ಲೂಕುಗಳನ್ನು ಸೇರಿಸಿ ಹದಿನೇಳು ಸೀಮೆಗಳನ್ನಾಗಿ ವಿಂಗಡಿಸಿದ್ದಾರೆ. ಆಡಳಿತದ ಅನುಕೂಲಕ್ಕಾಗಿ ಹದಿನೇಳು ಸೀಮೆಗಳನ್ನು ಎಂಟು ಕಟ್ಟೆಗಳಾಗಿ ವಿಂಗಡಿಸಿದ್ದಾರೆ.
ಹಿಂದಿನ ನಮ್ಮ ಸಮಾಜದ ಹಿರಿಯರು ದೀವರು ಸಾಕಷ್ಟು ಸಂಖ್ಯೆಲ್ಲಿರುವ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳನ್ನು ಸಂಘಟನೆಯ ವ್ಯಾಪ್ತಿಯಿಂದ ಹೊರಗಿಟ್ಟಿದ್ದಾರೆ. ಬಹುಶಃ ಆ ತಾಲ್ಲೂಕುಗಳು, ಸಾಗರದಿಂದ ಹೊಸನಗರ 42, ತೀರ್ಥಹಳ್ಳಿ 76 ಕಿಲೋಮೀಟರು ದೂರದಲ್ಲಿರುವುದೇ ಕಾರಣವಾಗಿರಬಹುದು. ನಾಮಧಾರಿ ವಿಷ್ಣುಭಕ್ತರ ಸಂಘದಂದ ಅತ್ಯಂತ ಹಿಂದುಳಿದ ಸಮಾಜದ ಬದಲಾವಣೆಗೆ ಸಾಕಷ್ಟು ಪ್ರಯತ್ನ ನಡೆದಿರುವುದು ಕಂಡುಬರುತ್ತದೆ.
ಸ್ವಾತಂತ್ರ್ಯಾನಂತರ ಸೊರಬ ತಾಲ್ಲೂಕಿನಲ್ಲಿ 1948ರಲ್ಲಿ ಸೊರಬ ತಾಲ್ಲೂಕಿಗೆ ಸೀಮಿತವಾದ ಹಾಲಕ್ಷತ್ರಿಯ ಸುಧಾರಣಾ ಸಂಘ ಸ್ಥಾಪನೆ ಮಾಡಿ ಇದರ ಮೂಲಕ ಸಮಾಜ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ಕಂಡುಬರುತ್ತದೆ. ಸಂಘದ ಸಂಸ್ಥಾಪಕರಲ್ಲೊಬ್ಬರಾದ ಸೊರಬ ಟೌನ್ ಮುನ್ಸಿಪಲ್ ಮುತ್ಸದ್ದಿಯವರಾದ ಶ್ರೀ ಕೆ. ಬಂಗಾರಪ್ಪನವರು ‘ಹಾಲಕ್ಷತ್ರಿಯ ಸುಧಾರಣಾ ಸಂಘದ ನಿರ್ಣಯಗಳು’ ಎಂಬ ಪುಸ್ತಿಕೆಯನ್ನು ಬರೆದು 1948ರಲ್ಲಿ ಪ್ರಕಟಿಸಿದ್ದಾರೆ. ಆ ಕಾಲದ ಪ್ರಸಿದ್ಧ ಸಮಾಜ ಸುಧಾರಕರಾದ ಶ್ರೀ ಕೆ.ಎಚ್. ಮರಿಯಪ್ಪನವರು ಮುನ್ನುಡಿ ಬರೆದಿದ್ದಾರೆ. ಸೊರಬ ತಾಲ್ಲೂಕು ಸಲಹಾ ಸಮಿತಿಯವರಿಂದ ಅನುಮೋದಿಸಲ್ಪಟ್ಟಿದೆ. ಮುಂದುವರಿಯುತ್ತದೆ…….
ಸತೀಶ ನಾಯ್ಕ
ಸಂಪಾದಕರು
ಪವರ್ ಆಫ್ ಎಕ್ಸಪ್ರೆಸ್ ಪತ್ರಿಕೆ. ಭಟ್ಕಳ